Sponsors

 

 

NEOWAY REALTY SOLUTIONS

 

Search
Community

Please follow us on...

MKANT Newsletter - KAMPU


New Edition

Please click here to read the Fifth edition of Kampu, released on October 25th 2011 ( Deepavali Edition )


Older Editions

Please click here to read the Fourth edition of Kampu, released on July 14th, 2011
 

Please click here to read the Third edition of Kampu, released on April 4th, 2011


Please click here to read the second edition of Kampu, released on January 15th, 2011


Please click here to read the first edition of Kampu, released on October 30th, 2010

 

Ugaadi 2010

Please click here to read the report on the Ugaadi 2010 written by Poornima Subramanya

 

 

ಯುಗಾದಿ 2009

 

ಸಂತಸ ತಂದ ಸಂಭ್ರಮ ತಂದ ಯುಗಾದಿಯ ಹಬ್ಬ.            Please click here to view the gallery.

ಏನು ವಿನೋದ ಏನುಲ್ಲಾಸ ಮರೆಯುವುದೇ ಅಬ್ಬಾ!

ಪ್ರಾಯೋಜಕರಿಗೂ ಪ್ರತಿಭೆಗಳಿಗೂ ನಮ್ಮೀ ವಂದನ,

ಸಭೆಯನು ತುಂಬಿದ ಜನಗಳಿಗೂ ಇದ್ದೇ ಇದೆ ನಮನ.

ಸ್ವಯಂ ಸೇವಕರೇ, ನಿಮ್ಮ ಸಹಾಯ ಇಲ್ಲದಿದ್ದರೆ ಹೀಗೆ

ಆಗುತ್ತಿತ್ತು ಎಲ್ಲಾ ಶ್ರಮವೂ - ಹೋಮ ನೀರಿಗೆ.

ಹೀಗೇ ಇರಲಿ ನಿಮ್ಮೆಲ್ಲರ ಪ್ರೀತಿ ಸಂಘದ ಮೇಲೆ

ಹೆಚ್ಚಿನ ಚಿತ್ರ ನೋಡಲು ನೀವು ಚಿಟುಕಿಸಿ ಇಲ್ಲೇ.

 

-ಪೂರ್ಣಿಮ ಸುಬ್ರಹ್ಮಣ್ಯ

 

 

ಸಂತಸ ಸಂಭ್ರಮದ ಮಲ್ಲಿಗೆ ಯುಗಾದಿ  

----------------------

ವರದಿ: ಪೂರ್ಣಿಮ ಸುಬ್ರಹ್ಮಣ್ಯ

ಡ್ಯಾಲ್ಲಸ್, ಟೆಕ್ಸಾಸ್.

 

ಏಪ್ರಿಲ್ 11ರ ಸಂಜೆ ಡ್ಯಾಲಸ್ ಕನ್ನಡಿಗರಿಗೆಲ್ಲಾ ಸಂತಸ, ಸಂಭ್ರಮ ತಂದಿದ್ದು ಇಲ್ಲಿನ ಮಲ್ಲಿಗೆ ಕನ್ನಡ ಸಂಘದವರು ನಡೆಸಿದ ಯುಗಾದಿ ಹಬ್ಬ.ಕಳೆದ ದೀಪಾವಳಿ ಕಾರ್ಯಕ್ರಮದ ಯಶಸ್ಸಿನಿಂದ ಪ್ರೇರಿತರಾಗಿ ಈ ಬಾರಿ ’ದ ಕಾಲೋನಿ ಹೈಸ್ಕೂಲ್‍ನ ದೊಡ್ಡ ಸಭಾಂಗಣದಲ್ಲಿ ಹೆಚ್ಚಿನ ಜನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

 

ತಮ್ಮ ಸರಸ, ವಿರಸ, ವಿನೋದಗಳಿಂದ ಇಡೀ ಕಾರ್ಯಕ್ರಮವನ್ನು ನಿರೂಪಿಸಿ ಅಂದಗಾಣಿಸಿದವರು ಜಯಶ್ರೀ ಮತ್ತು ಪ್ರಕಾಶ್ ಮೂರ್ತಿ. ಲಕ್ಷ್ಮಣ್ ಮಂಜುನಾಥ್ ವಕ್ರತುಂಡ ಮಾಹಾಕಾಯನಿಗೆ ವಂದಿಸಿದ ಮೇಲೆ ,ಆದಿತ್ಯ ಮತ್ತು ಅರ್ಚನಾ ಮೂರ್ತಿಯವರು ಗಂ ಗಣಪತೇ ಎಂದು ಹಾಡಿದರು. ನಂತರ ಇಲ್ಲಿನ ಅರಳು ಮಲ್ಲಿಗೆ ಕನ್ನಡ ಶಾಲೆಯ ಮಕ್ಕಳಿಂದ, ರೂಪ ಶ್ರೀನಿವಾಸ್ ನಿರ್ದೇಶನದಲ್ಲಿ ಹಾಡು ನೃತ್ಯಗಳ ಸಂಭ್ರಮ.

 

ಶ್ರೀನಾಥ್ ಬೆಲ್ಡೋನಾ ಅವರ ಸ್ವಾಗತ ಭಾಷಣಕ್ಕೆ ಪೂರಕವಾಗಿ, ರಮೇಶ್ ಮೇಲ್ಕೋಟೆ ಬರೆದ ’ಧರಣಿ ಮಂಡಲ ಮಧ್ಯದೊಳಗೆ ಮಾದರಿ ಸ್ವಾಗತ ಗೀತೆ, ಮಾಹಿತಿ ಮತ್ತು ಮನರಂಜನೆಗಳ ಸಂಗಮ.ಆನಂದ ಪ್ರಾಡಕ್ಟ್ಸ್‍ಗಳನ್ನು ಜನರಿಗೆ ಪರಿಚಯಿಸುವ ನೃತ್ಯ, ಜಯಂತಿ ಶಾಸ್ತ್ರಿ ಮತ್ತು ಕಲ್ಪನಾ ಮೂರ್ತಿಯವರ ನಿರ್ದೇಶನದಲ್ಲಿ ಚೆನ್ನಾಗಿ ಮೂಡಿಬಂತು.ಸುಮನಾ ಹೆಗ್ಡೆ ಅವರ ತಯಾರಿಯಲ್ಲಿ ಅನೇಕ ಮಕ್ಕಳು ನಡೆಸಿಕೊಟ್ಟ ಆರ್ಕೆಸ್ಟ್ರಾ ಒಂದು ಉತ್ತಮ ಕಾರ್ಯಕ್ರಮ. ಶಕ್ತಿ ಸಹಿತ ಗಣಪತಿಯನ್ನು ವಂದಿಸಿದ ನಂತರ, ಸಂತಸ ಸಂಭ್ರಮದ ಯುಗಾದಿಯನ್ನು ಬಣ್ಣಿಸಿದರು. ನಮ್ಮ ನಿಮ್ಮದಾದ ಸೊಗಸಾದ ಕನ್ನಡ ಭಾಷೆಯ ಸೊಗಸನ್ನು ತೋರಿಸಿಕೊಟ್ಟರು. ಪಿಟೀಲು ಮತ್ತು ಮೃದಂಗದಲ್ಲಿಯೂ ಮಕ್ಕಳೇ ಜೊತೆಯಾಗಿದ್ದು ವಿಶೇಷ.

 

ಜೋಗಿ ಜೋಗಿ, ರಾಜಾ ಮುಂತಾದ ಚಮಕ್ ಚಮಕ್ ಹಾಡುಗಳಿಗೆ ಥಳುಕು ಬಳುಕಿನ ಉಡಿಗೆಯಲ್ಲಿನ ಮೂರು ಪುಟ್ಟ ಪೋರಿಯರು ಕುಣಿದದ್ದು ಪ್ರೇಕ್ಷಕರ ಚಪ್ಪಾಳೆ ಮತ್ತು ಶಿಳ್ಳೆಗಳಿಗೆ ಬಲ ತಂದಿತು. ಮಕ್ಕಳನ್ನು ತಯಾರುಗೊಳಿಸಿದವರು ಶಿಲ್ಪಾ ನಾಗರಾಜ್. ನಂತರ ಅಖಿಲ ರಾವ್ ಅವರ ಶಿಷ್ಯೆಯರಿಂದ ಮೋಹಕ ಕಥಕ್ ನೃತ್ಯ. ಸಂಧ್ಯಾ ಹೊನ್ನವಳ್ಳಿ ಅವರ ಉತ್ತಮ ತರಬೇತಿಯಲ್ಲಿ ಮೂಡಿ ಬಂದ ಚಿಕ್ಕ ಚೊಕ್ಕ ನಾಟಕ "ದೇವರು ಏನು ಮಾಡಿದ ಗೊತ್ತಾ?". ಎಲ್ಲಾ ಪುಟಾಣಿಗಳೂ ಅಚ್ಚುಕಟ್ಟಾಗಿ ಸ್ವಚ್ಛ ಕನ್ನಡದಲ್ಲಿ ಮಾತಾಡಿ ಎಲ್ಲರ ಮನ ಗೆದ್ದರು.

 

ಸುಲತಾ ತಲಗೇರಿಯವರು ಇಲ್ಲಿನ ಉತ್ಸಾಹೀ ವನಿತೆಯರನ್ನು ತರಬೇತುಗೊಳಿಸಿ ಬಾರಯ್ಯ ಬಾರಯ್ಯ ಎಂದು ನೃತ್ಯ ರಂಗೋಲಿ ಮೂಡಿಸಿದರು.ಶ್ರೀವತ್ಸ ರಾಮನಾಥನ್ ನಿರ್ದೇಶನದ ಲಕ್ಷ್ಮಣನ ರಾಮಾಯಣ ನಾಟಕ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿತು. ಒಬ್ಬೊಬ್ಬ ಪಾತ್ರಧಾರಿಯೂ ಒಂದೊಂದು ಶೈಲಿಯಲ್ಲಿ ಮಾತನಾಡಿದ್ದು ಬಹಳ ವಿನೋದವಾಗಿತ್ತು. ನಾಟಕದ ಕೊನೆಯಲ್ಲಿ ತಿಳಿಸಿದ ನೀತಿಯಿಂದ ನಕ್ಕೂ ನಕ್ಕೂ ಜನರ ಹೊಟ್ಟೆ ಹುಣ್ಣಾಯಿತು.

 

ಪುಟಾಣಿ ಖುಷಿ ಮತ್ತು ನವ್ಯ ಜೊತೆ ಎಲ್ಲರೂ ಜನಗಣಮನ ಎಂದು ಭಾರತಕ್ಕೆ ಜಯಕಾರ ಹಾಕಿದರು. ನಂತರ ವೇದಿಕೆಯೇರಿದ ಮತ್ತಷ್ಟು ಮಕ್ಕಳು ನಕ್ಷತ್ರ ಖಚಿತ ಅಮೆರಿಕಾ ಧ್ವಜಕ್ಕೆ ರಾಷ್ಟ್ರಗೀತೆಯೊಂದಿಗೆ ವಂದಿಸಿದರು. ನಂತರ ಇದ್ದೇ ಇದೆ, ಸ್ವಾದಿಷ್ಟ ಭೂರಿ ಭೋಜನ. ಈ ಕಾರ್ಯಕ್ರಮದ ಚಿತ್ರಪಟಗಳನ್ನು ಮೂರ್ತಿಯವರ ಕ್ಯಾಮರಾ ಕಣ್ಣಿನಿಂದ ಇಲ್ಲಿ ನೋಡಬಹುದು.

 

ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಎಲ್ಲಾ ಪ್ರಾಯೋಜಕರಿಗೂ, ಸ್ವಯಂ‍ಸೇವಕರಿಗೂ, ಸದಸ್ಯರಿಗೂ, ಹಬ್ಬಕ್ಕೆ ಶೋಭೆ ತಂದ ಪ್ರತಿಭೆಗಳಿಗೂ, ಆಗಮಿಸಿದ ಎಲ್ಲರಿಗೂ ಮಲ್ಲಿಗೆ ಕನ್ನಡ ಸಂಘದ ಕೃತಜ್ಞತೆಗಳು. ಹೀಗೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಂಘದ ಯಶಸ್ಸಿನಲ್ಲಿ ಪಾಲುದಾರರಾಗಬೇಕೆಂದು ಸಂಘದ ಕಾರ್ಯಕಾರಿ ಸಮಿತಿ ಸದಸ್ಯರ ಕೋರಿಕೆ.ತಮ್ಮ ತಮ್ಮ ಸ್ವಂತ ಕೆಲಸಗಳನ್ನು ಪಕ್ಕಕ್ಕಿಟ್ಟು, ಒಂದು ಸಮುದಾಯದ ಕಾಳಜಿಯಿಂದ ಕೆಲಸ ಮಾಡುತ್ತಿರುವ ಕಾರ್ಯಕಾರಿ ಸಮಿತಿ ಸದಸ್ಯರು, ಹಾಗೂ ಇಂಥಹುದೇ ಹಲವಾರು ಸಂಘ ಸಂಸ್ಥೆಗಳ ಹಲವಾರು ಕೈಗಳಿಗೆ ಹೃತ್ಪೂರ್ವಕ ಧನ್ಯವಾದಗಳು. ಬೇವನ್ನು ತಾವು ಉಂಡು ಬೆಲ್ಲವನ್ನು ನಮಗೆ ನೀಡುವ ಇವರ ಶ್ರಮಕ್ಕೆ ನಮ್ಮೆಲ್ಲರ ಮೆಚ್ಚುಗೆ.

 

 

ಮಲ್ಲಿಗೆಯ ದೀಪಾವಳಿ ಸಂಭ್ರಮ--ಒಂದು ಪಕ್ಷಿನೋಟ.

ವರದಿ: ಪ್ರಕಾಶ್ ಜೋಶಿ

ಅರ್ವಿಂಗ್, ಟೆಕ್ಸಾಸ್

 

Deepavali pictures.

ಡಲ್ಲಾಸ್‍ನ ಮಲ್ಲಿಗೆ ಕನ್ನಡ ಸಂಘವು ಉತ್ಸಾಹದಿಂದ ಆಲೆನ್ ಸಿವಿಕ್ ಸಭಾಂಗಣದಲ್ಲಿ ಏರ್ಪಡಿಸಿದ ದೀಪಾವಳಿ ಸಾಂಸ್ಕೃತಿಕ ಉತ್ಸವ, ನವೆಂಬರ್ 22-2008ರ ಸಂಜೆ ಉಪಸ್ಥಿತರಿದ್ದ ಕನ್ನಡ ಅಭಿಮಾನಿಗಳಿಗೆ ಪ್ರತಿಭೆಯ ರಸದೌತಣ ನೀಡಿತು. ಸಭೆಯನ್ನು ಸ್ವಾಗತಿಸಿದ ಪೂರ್ಣಿಮಾ-ಸುಬ್ರಹ್ಮಣ್ಯ ದಂಪತಿಗಳು ಇಡೀ ಕಾರ್ಯಕ್ರಮದ ಪರಿಚಯವನ್ನು ವಿಶಿಷ್ಟ ಗ್ರಾಮೀಣ ಭಾಷೆಯಲ್ಲಿ,ನವಿರಾದ ಹಾಸ್ಯದಲ್ಲಿ ನಡೆಸಿಕೊಡುತ್ತಾ ಎಲ್ಲರ ಮನಸೆಳೆದರು.

 

ಶ್ರೀಮತಿ.ಅನು ಕೃಷ್ಣಗಿರಿಯವರ ದೇವತಾ ಪ್ರಾರ್ಥನೆ ಸುಮಧುರವಾಗಿತ್ತು. ಕುಮಾರಿ.ಸ್ನೇಹ ಮತ್ತು ಸಂಗೀತಾ ಕುರಾಡ ಅವರ ಶಾಸ್ತ್ರೀಯ ಗಾಯನ ಮನಮುಟ್ಟಿತು. ಶ್ರೀಮತಿ.ಸಂಧ್ಯಾ ಹೊನ್ನವಳ್ಳಿ ಅವರ ನಿರ್ದೇಶನದಲ್ಲಿ ಮೂಡಿಬಂದ ನೃತ್ಯ ಚೇತೋಹಾರಿಯಾಗಿತ್ತು.ಹಾಡಿನ ಒಂದು ಸಾಲು"ಜನಬೆರೆತರೆ ಸಮರಸದಲಿ ಅದೇ ಒಲವಿನ ಹೊಸಗಾನ" ಕಾರ್ಯಕ್ರಮದ ಕೀನೋಟ್ ಅನ್ನಿಸಿತು.ಶ್ರೀಮತಿ.ಕವಿತಾ ಕುಪ್ಪುಸ್ವಾಮಿ ಕಲಿಸಿಕೊಟ್ಟ ಸ್ವಾಗತಮ್ ಕೃಷ್ಣ ನೃತ್ಯ ರೂಪಕವನ್ನು ಮಕ್ಕಳು ಭಾವಪೂರ್ಣವಾಗಿ ಅಭಿನಯಿಸಿದರು.

 

ಅದ್ಧೂರಿಯ ಅಮೆರಿಕದಲ್ಲಿ ಅಮ್ಮನ ಭಾಷೆ ಕಲಿಯುವ ಆಸೆಯಿಂದ ಪುಟ್ಟ ಮಕ್ಕಳು ಶಾಲಾ-ಮಂದಿರಕ್ಕೆ ಪ್ರತಿವಾರವು ತಪ್ಪದೆ ಹೋಗಿ ಕನ್ನಡ ಮಾತು,ಬರಹ,ಹಾಡು,ನೃತ್ಯದಲ್ಲಿ ಜಾಣರಾಗಿರುವುದು ನಾವೆಲ್ಲರೂ ಅಭಿಮಾನದಿಂದ ಚಪ್ಪಾಳೆ ತಟ್ಟಬೇಕಾದ ವಿಷಯ. ಮಕ್ಕಳಿಗೆ ಪ್ರೀತಿಯಿಂದ ಕಲಿಸುವ ಶ್ರೀಮತಿ ರೂಪ ಶ್ರೀನಿವಾಸ್,ಶ್ರೀಮತಿ ಜಯಶ್ರೀ ಮೂರ್ತಿ ವಂದನೀಯರು, ಮಕ್ಕಳು ಮುದ್ದಾಗಿ,ಚೊಕ್ಕವಾಗಿ ತಮ್ಮ ಕೆಲಸ ಮಾಡಿದರು.

 

ಸಂಘದ ಅಧ್ಯಕ್ಷ ಶ್ರೀ ಸುಧೀಂದ್ರ ಪ್ರಹ್ಲಾದನ್ ಚಟುವಟಿಕೆಯ ವರದಿಮಾಡಿ ಪೋಷಕ ಸದಸ್ಯರ ಸಂಖ್ಯೆಯಲ್ಲಿ ಇನ್ನೂ ಹೆಚ್ಚಿನ ಉತ್ಸಾಹ,ಪ್ರಗತಿ ಕಾಣಬೇಕು,ನಗರದ ಕನ್ನಡಿಗರು 2000 ದಷ್ಟಿದ್ದು, ಸಂಘದ ಸದಸ್ಯರಪಟ್ಟಿ ಮಾತ್ರ ಅಷ್ಟು ಬೆಳೆದಿಲ್ಲಯೆಂದು ಹೇಳಿದ ಕಳಕಳಿಯ ಮಾತು ಇಲ್ಲಿನ ಸಮಸ್ತ ಕನ್ನಡಿಗರ ಕಿವಿಮುಟ್ಟಿದೆಯೆಂದು ನಂಬಬೇಕಾಗಿದೆ.

 

ಹತ್ತು ವರುಷವೂ ತುಂಬಿರದ ಮೂರು ಪುಟಾಣಿ ಹೆಣ್ಣು ಮಕ್ಕಳು(ಅಮೂಲ್ಯ,ರೋಹಿಣಿ ಮತ್ತು ಸಂಜನಾ)ಸುಶ್ರಾವ್ಯವಾಗಿ ಪಠಿಸಿದ "ಮಹಿಷಾಸುರ ಮರ್ದಿನಿ" ಸ್ತೋತ್ರ, ಸತ್ಯವಾಗಿ ಬೆರಗುಗೊಳಿಸಿತು. ಪುಸ್ತಕದ ನೆರವಿಲ್ಲದೆ,ಉಚ್ಛಾರಣೆಯ ದೋಷವಿಲ್ಲದೆ ಸುಲಲಿತವಾಗಿ ಹಾಡಿದ ಮಕ್ಕಳು, ಕಲಿಸಿಕೊಟ್ಟವರು ಶ್ಲಾಘನೀಯರು. ಮಕ್ಕಳ ಪ್ರತಿಭೆ ಮತ್ತೊಮ್ಮೆ ಮಿಂಚಿಸಿದ ನಾಟಕ,ಶ್ರೀಮತಿ ಸಂಧ್ಯ ಹೊನ್ನವಳ್ಳಿ ಅವರ ನುರಿತ ನಿರ್ದೇಶನದ ವೆಂಗು ಭಟ್ಟ..ಅಭಿನಯ,ಸಂಭಾಷಣೆ ಎಲ್ಲವೂ ಸೊಗಸು.

 

ಈಗ ಯುವ ಕನ್ನಡ ಕಲಾವಿದರ ಸರದಿ..ಪ್ರಾಣಸಖಿಯ ಜೊತೆಯಲ್ಲಿ ಚಲನಚಿತ್ರ ಗೀತೆಗೆ ಲಯಬದ್ಧವಾಗಿ ವೇದಿಕೆಯಮೆಲೆ ಸಭಿಕರ ಹರ್ಷೋದ್ಗಾರದ ನಡುವೆ ನಟಿಸಿತೋರಿಸಿದ ಹಾಡುಗಳು ಇಪ್ಪತ್ತು.ಆದರೂ ಪ್ರೇಕ್ಷಕರ ಒನ್ಸ್‍ಮೋರ್ ನಡೆದಿತ್ತು. ಈ ಹೊಸರೀತಿಯ ಅಂತ್ಯಾಕ್ಷರಿ ಕಲ್ಪನೆಯ ಕ್ರೆಡಿಟ್ಟು ಶ್ರೀ.ರಮೇಶ್ ಮತ್ತು ಶ್ರೀಮತಿ.ರಾಜಶ್ರೀ ಮೇಲ್ಕೋಟೆಯವರಿಗೆ ಸಲ್ಲಬೇಕು.

 

ಶ್ರೀಧರ್ ಮಧುಗಿರಿಯವರು ಸಂಘದ ಸದಸ್ಯರು ಭಾಗವಹಿಸಿದ ಕ್ರೀಡಾ ವರದಿ ಗಮನೀಯವಾಗಿತ್ತು. ಒಳ್ಳೆಯ ಕೆಲಸ ಮಾಡಿದ್ದಾರೆ ನಮ್ಮ ಶ್ರೀಧರ್! ಅವರಿಗೆ ಕನ್ನಡದಲ್ಲಿ ಓದಲು ಕ್ರೀಡಾಸಕ್ತರು ಸ್ವಲ್ಪ ನೆರವು ನೀಡಿದರೆ ಇನ್ನೂ ಛಲೋ ಇರ್ತದ್ರೀಯಪ್ಪಾ!

 

ಸಾಮೂಹಿಕ ನಾಡಭಕ್ತಿ ಗೀತೆ ..ದೀಪಾವಳಿ ಆಚರಣೆಯಂದು..ಹಚ್ಚೇವು ಕನ್ನಡದ ದೀಪ..ಸುಂದರವಾದ ಆಯ್ಕೆ..ಭಾವಪೂರ್ಣ ಗಾಯನ..ನಿರ್ದೆಶನ.

 

ಕಾರ್ಯಕ್ರಮದ ಕೊನೆಯಭಾಗವಾಗಿ ಮಧುರ ಗಾನವಾಹಿನಿ. ಚತುರ ನಟ,ಗಾಯಕ ಶೀವತ್ಸ ಅವರ ನಿರ್ದೇಶನದಲ್ಲಿ ಸಭಿಕರಿಗೆ ಹರ್ಷ ನೀಡಿತು. ಹಾಡಿದ ಎಲ್ಲ ಹಿರಿಯ ಹಾಗೂ ಕಿರಿಯ ಪ್ರಾಯದ ಗಾಯಕರು, ಶ್ರದ್ಧೆಯಿಂದ ಅಭ್ಯಾಸಮಾಡಿ ತಮ್ಮ ಪ್ರತಿಭೆಯನ್ನು ನಿರಾಯಾಸವಾಗಿ ನಿರೂಪಿಸಿದರು. ಸಮಯ ಮೀರುತಿತ್ತು..ಮಕ್ಕಳ ಒತ್ತಾಯವೋ, ಊಟದ ಅವಸರವೋ,ರಸಿಕರು ನಿರ್ಗಮಿಸತೊಡಗಿದರು. ಗಾಯಕರ ಉತ್ಸಾಹಕ್ಕೆ ಕೊರೆಯಿರಲಿಲ್ಲ!

 

ಇಲ್ಲಿ ಒಂದು ಅಭಿಪ್ರಾಯವನ್ನು ಮುಂದಿನ ಕಾರ್ಯಕ್ರಮದ ನಿರ್ವಾಹಕರು ಗಮನಿಸಬೇಕು. ಕಾರ್ಯಕ್ರಮದಲ್ಲಿ ಭಾಗವಹಿಸುವವರು ಜಾಸ್ತಿ ಇದ್ದರೆ ಎಲ್ಲರಿಗೂ ಅವಕಾಶ ನೀಡಲು ಬೇಗ ಪ್ರಾರಂಭಿಸಿ, ಪ್ರೇಕ್ಷಕರಿಗೆ ಮುಕ್ತಾಯದವರೆಗೆ ಇರಲು ಮನವಿ ಮಾಡಿ..

 

ವಂದನಾರ್ಪಣೆಯನ್ನು ಶ್ರೀ ಮಧು ಶಾಸ್ತ್ರಿ ತೃಪ್ತಿಕರವಾಗಿ ಮಾಡಿ, ಎಲ್ಲರ ಸಹಕಾರ..ಸಹೃದಯತೆಯನ್ನು ಪ್ರೀತಿಯಿಂದ ಹೇಳಿದರು.

 

ಭಾರತ ಮತ್ತು ಅಮೆರಿಕಾ ದೇಶಗಳ ರಾಷ್ಟ್ರಗೀತೆಗಳನ್ನು ಕನ್ನಡಿಗರೆಲ್ಲರೂ ಹೃತ್ಪೂರ್ವಕವಾಗಿ ಹಾಡಿ

ದೀಪಾವಳಿ ಸಾಂಸ್ಕೃತಿಕ ಮಹೋತ್ಸವವನ್ನು ಮುಕ್ತಾಯ ಗೊಳಿಸಲಾಯಿತು.

 

ಈ ಕಾರ್ಯಕ್ರಮದ ಚಿತ್ರಗಳನ್ನು ಇಲ್ಲಿ ಪ್ರಕಟಿಸಲಾಗಿದೆ http://www.murthy.smugmug.com/gallery/6629753_DmYDC#423382676_At9pz

 

shuBaashayagaLu.

 

 

 

In a Delightful Evening Music Concert

Roopa & Deepa, Kasaravalli Sisters

ಮಲ್ಲಿಗೆಯಲ್ಲಿ ಭಾವ ಕರ್ನಾಟಕ

ವರದಿ: ಪೂರ್ಣಿಮ ಸುಬ್ರಹ್ಮಣ್ಯ, ಅರ್ವಿಂಗ್.  

ಕಳೆದ ಶುಕ್ರವಾರ ಸೆಪ್ಟೆಂಬರ್ ೧೯ರ ಸಂಜೆ, ಡಾಲ್ಲಸ್ ನಗರದ ಮಲ್ಲಿಗೆ ಕನ್ನಡ ಸಂಘವು ’ಆಲ್ಲನ್ ಲೈಬ್ರರಿ ಆಡಿಟೋರಿಯಮ್‍’ನಲ್ಲಿ ಕಾಸರವಳ್ಳಿ ಸಹೋದರಿಯರೆಂದೇ ಚಿರಪರಿಚಿತವಾಗಿರುವ ರೂಪ-ದೀಪ ಅವರಿಂದ ಕರ್ನಾಟಕ ಮತ್ತು ಸುಗಮ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಿತ್ತು.   ಅಧ್ಯಕ್ಷ ಸುಧೀಂದ್ರ ಪ್ರಹ್ಲಾದನ್ ಅವರು ಗಾಯಕಿಯರನ್ನು, ಸಭಿಕರನ್ನು ಸ್ವಾಗತಿಸಿದರು. ಸುಮ ಕೃಷ್ಣಪ್ರಸಾದ್ ಅವರು ಗಾಯಕಿಯರ ಪರಿಚಯ ಮಾಡಿಕೊಟ್ಟ ನಂತರ ’ಭಜಮಾನಸ ವಿಘ್ನೇಶ್ವರ’ (ಭೋಗಾದಿ ರಾಗ, ಆದಿತಾಳ) ಕೃತಿಯೊಂದಿಗೆ ಕಛೇರಿ ಆರಂಭವಾಯಿತು. ನಂತರ ಮರುಗೇಲರಾ, ನಾರಾಯಣಾ ನಿನ್ನ ನಾಮದ ಸ್ಮರಣೆಯ, ಢಂಗುರವ ಸಾರಿರಯ್ಯ, ಮೇರುಸಮಾನಂ, ಹರಿಕಥಾ ಶ್ರವಣ, ಎಂತ ಮುದ್ದೋ ಎಂತ ಸೊಗಸು, ನಿನ್ನನೇ ಪಾಡುವೆ, ಕಂಡೆನಾ ಗೋವಿಂದನಾ ಮುಂತಾದ ಕೀರ್ತನೆ ಹಾಗೂ ದೇವರನಾಮಗಳಿಂದ ಸಭಿಕರ ಮನರಂಜಿಸಿದರು. ವಿಜಯದಾಸರ ’ಹರಿಕಥಾ ಶ್ರವಣ ಮಾಡೋ, ಹರಿಪದ ವೈಕುಂಠ ನೋಡೋ’(ರೀತಿಗೌಳ ರಾಗ, ಆದಿತಾಳ) ಪ್ರಸ್ತುತಿಯಲ್ಲಿ ವಿಸ್ತಾರವಾದ ಆಲಾಪನೆ ಹಾಗೂ ಪಾಂಡವಪ್ರಿಯ ರಾಗದ ’ಕಂಡೆನಾ ಗೋವಿಂದನ’ ಕೃತಿಯಲ್ಲಿ ಸುಂದರ ಸ್ವರಪ್ರಸ್ತಾರದಿಂದ ತಮ್ಮ ವಿದ್ವತ್ತನ್ನು ಸಭಿಕರಿಗೆ ಪರಿಚಯಿಸಿದರು.  More ...
 


Mallige Samachara


From MKANT Committee Newsdesk...
Aug/28/2008

Namaskara! Most Summer vacations have come to a close although the Summer heat continues to linger. Hope you all had a great and safe Summer. As the new academic year begins and our schools resume with rejuvenated energy and vigor, we are proud to announce that we are feeling the same sense of renewed energy to serve our community. We would like to thank all members who took time to complete the online survey and urge those of you who have not yet done so to complete the survey at your earliest convenience. This information provides a brief albeit useful measure that will guide the committee to undertake future activities to serve you all in an effective manner. Also, we take this opportunity to extend a very warm and hearty welcome to all the Kannadigas who have re-located to the Dallas - Fort Worth (DFW) metroplex, and to all the new students who have just arrived to pursue their educational and career goals at the various nationally and internationally renowned universities in the region. We wish you, our readers, the very best of success in all your endeavors.
More ...


ಮಲ್ಲಿಗೆಯಲ್ಲರಳಿದ ಯುಗಾದಿ


ವರದಿ: ಪೂರ್ಣಿಮ ಸುಬ್ರಹ್ಮಣ್ಯ ಡಾಲ್ಲಸ್, ಟೆಕ್ಸಾಸ
********************************************************
 
ಇದೇನಿದು, ಯುಗಾದಿ ಹಬ್ಬದ ಹೊತ್ತಿಗೆ ಮಲ್ಲಿಗೆ ಅರಳುತ್ತೇ ಹೊರತು, ಮಲ್ಲಿಗೇಲಿ ಯುಗಾದಿ ಅರಳತ್ಯೇ ಅಂತ ಯೋಚಿಸ್ತಿದೀರಾ? ನಾನು ಹೇಳಕ್ಕೆ ಹೊರಟಿರೋದು ನಮ್ಮ ಡಾಲ್ಲಸ್‍ನ ಮಲ್ಲಿಗೆ ಕನ್ನಡ ಸಂಘದಲ್ಲಿ ನಡೆದ ಯುಗಾದಿ ಹಬ್ಬದ ಬಗ್ಗೆ.   ಮೊನ್ನೆ ಮೇ ೧೮ರಂದು, ಡಾಲ್ಲಸ್ ನಗರದಲ್ಲೊಂದು ಸುಂದರ ಸಂಜೆ. ಶ್ರೀಧರ್ ಮತ್ತು ಕೃಷ್ಣಮೂರ್ತಿ ಅವರ ಪ್ರಯತ್ನದಿಂದ ದೊರಕಿದ ’ಆಲನ್ ಲೈಬ್ರರಿ ಸಿವಿಕ್ ಆಡಿಟೋರಿಯಮ್’ ಆಲನ್, ಟೆಕ್ಸಾಸ್ ನಲ್ಲಿ ಇಲ್ಲಿಯ ಮಲ್ಲಿಗೆ ಕನ್ನಡ ಸಂಘ ಯುಗಾದಿ ಆಚರಿಸಿತು. ಸಂಘದ ಉಪಾಧ್ಯಕ್ಷೆ ವಸುಂಧರಾ ಕಿಕ್ಕೇರಿಯವರ ಸುಂದರ ನಿರೂಪಣೆ, ಗಜವದನನನ್ನು ಬೇಡಿದ ಮೇಘನಾ ಬಳ್ಳಾರಿಯ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮವನ್ನು ಇಲ್ಲಿ ಹುಟ್ಟಿ ಬೆಳೆದ ಮಕ್ಕಳೇ (ಮೇಘನಾ ಬಳ್ಳಾರಿ, ಮೇಧಾ ಭಾರದ್ವಾಜ್, ಪ್ರಿಯಾಂಕ ಮೇಲ್ಗಿರಿ, ಶೃತಿ ಹೆಗಡೆ, ಮಧುವಂತಿ ಕಿಕ್ಕೇರಿ)ಸ್ಪಷ್ಟ ಕನ್ನಡದಲ್ಲಿ ನಡೆಸಿಕೊಟ್ಟದ್ದು ಒಂದು ವಿಶೇಷ.  More ...