*************************************
²²gÀ £ÀqɪÀÄÄr
ºÁzÀÄ §A¢º
£ÀªÀªÀ¸ÀAvÀPÉ ¸ÁéUÀvÀ.
ºÉƸÀ ªÀµÀðzÀ
ºÉƹۮ°,G¨sÀAiÀÄ
PÀıÀ¯ÉÆÃ¥Àj ¸ÁA¥ÀævÀ.
MtVzɯÉUÀ¼À
UÀAzsÀ PÀgÀUÀ®Ä
¥ÀÈyéà ¸À¸Àå±Á°¤.
¹» PÀ» J®èªÀ
MqÀ®° ºÉÆwÛºÀ
PÁ® ¤vÀåªÁ»¤.
£ÉÆÃªÀÅ £À°«£À
£À±ÀégÀzÁZÉUÉ
¤vÀå £ÀÆvÀ£À ¥ÀæPÀÈw.
²²gÀ ¨ÉøÀgÀ,
ªÀ¸ÀAvÀ ¨sÀgÀªÀ¸É -
IÄvÀÄ«£À ¸ÀºÀd UÀw;
²æÃ ±ÀA ±ÀĨsÀA ¸Àé¹Û.
-- ¥ÀÆtÂðªÀÄ
ಮ್ಯಾರಥಾನ್ ಒಂದು ಯಶೋಗಾಥೆ
ಡಲ್ಲಾಸ್ ವೈಟ್ ರಾಕ್ ಮ್ಯಾರಥಾನ್ ೧೯೭೧ ರಿಂದ ನಡೆದು ಬಂದಿದೆ. ದೇಶದ ನಾನಾ ಭಾಗಗಳಿಂದ ಬಂದು ಈ ಮ್ಯಾರಥಾನ್ನಲ್ಲಿ ಪಾಲ್ಗೊಳುತ್ತಾರೆ. ಕಳೆದ ಬಾರಿ ೧೭೦೦೦ ವಿದ್ದ ಮಿತಿಯನ್ನು ಈ ಸಾರಿ ೨೦೦೦೦ಕ್ಕೆ ಏರಿಸಲಾಯಿತು. ಪ್ರತಿವರ್ಷ ಡಿಸೆಂಬರ್ ನ ಎರಡನೆಯ ಭಾನುವಾರದಂದು ನಡೆಸುತ್ತಾರೆ. ಈ ಮ್ಯಾರಥಾನ್ನ ಉದ್ದೇಶ ಸ್ಥಳೀಯ ಸ್ಕಾಟಿಷ್ ಆಸ್ಪತ್ರೆ ಹಾಗು ಅದರ ರೋಗಿಗಳಿಗೆ ನೆರವಾಗಲು .
ಮ್ಯಾರಥಾನ್ನ ಜ್ವರ ನಮ್ಮ ಗುಂಪಿನಲ್ಲಿ ಶುರುವಾದದ್ದು ಹೀಗೆ. ಹಲವಾರು ಮ್ಯಾರಥಾನ್ನಲ್ಲಿ ಭಾಗವಹಿಸಿದ್ದ ರಘುರಾಮ್ ದಂಪತಿಗಳು ೨೦೦೮ರಲ್ಲಿ ತಮಗೆ ಗೊತ್ತಿದ್ದ ಕನ್ನಡಿಗರಿಗೆ ಈ ಮ್ಯಾರಥಾನ್ನಲ್ಲಿ ಭಾಗವಹಿಸಲು ಕೇಳಿಕೊಂಡು ೨ ತಂಡಗಳಿಗೆ ತರಬೇತಿಯಿತ್ತು ಕರೆದು ಕೊಂಡು ಹೋದರು. ಅದರಲ್ಲಿ ಭಾಗಿಯಾಗಿ ಬಂದ ಆತ್ಮೀಯರಲ್ಲಿ ಒಬ್ಬರಾದ ಶ್ರೀಮತಿ ಲತಾ ಶಾಸ್ತ್ರಿಯವರು ಮ್ಯಾರಥಾನ್ ಚಿತ್ರಗಳನ್ನು ಲಗತ್ತಿಸಿ ತಮ್ಮ ಸ್ನೇಹಿತರಿಗೆಲ್ಲಾ ಒಂದು ಈಮೈಲನ್ನು ಕಳುಹಿಸಿದರು. ಡಿಸೆಂಬರ್ ೧೬ರನ್ದು ಬಂದ ಅಂತರ್ಜಾಲ ಪತ್ರದ ಒಕ್ಕರಣೆ ಈ ರೀತಿಯಿತ್ತು. ನಿಮ್ಮೆಲ್ಲರಿಗೂ ಇದೇ ರೀತಿ ಮ್ಯಾರಥಾನ್ನಲ್ಲಿ ಭಾಗವಹಿಸಲು ಇಚ್ಛೆ ಇದ್ದರೆ ಮುಂದಿನ ವರ್ಷದ ಮ್ಯಾರಥಾನ್ಗೆ ನಾನು ನಿಮಗೆ ತರಬೇತಿಯನ್ನು ನೀಡುತ್ತೇನೆ. ಪ್ರಯತ್ನ ಪಡುತ್ತೇವೆ ಎನ್ನುವ ಒಣ ಮಾತಾಡಿದರೆ ಸಾಲದು ಆತ್ಹ್ಮಸ್ತ್ಯರ್ಯ ಹಾಗು ಸಾದಿಸುತ್ತೇನೆ ಎನ್ನುವ ಛಲವಿದ್ದರೆ ತಿಳಿಸಿ. ಇದು ರಿಲೇ ತಂಡ. ಇದರಲ್ಲಿ ವಯ್ಯುಕ್ತಿಕ ಪ್ರಯತ್ನಕ್ಕಿಂಥ ತಂಡದ ಸಾಧನೆ ಮುಖ್ಯ . ಮಳೆ ಚಳಿ ಎನ್ನದೆ ಪ್ರತಿ ಶನಿವಾರ ತರಬೇತಿಗೆ ಬರುವುದಲ್ಲದೆ ವಾರಕ್ಕೆ ಎರಡು ದಿನ ಪ್ರತ್ಯೇಕವಾಗಿ ಅಭ್ಯಸಿಸಬೇಕು. ೧೧ ತಿಂಗಳು ಹೀಗೆ ಪರಿಶ್ರಮ ಪಡುವುದರಲ್ಲಿ ಇಚ್ಛೆ ಇದ್ದರೆ ತಿಳಿಸಿ. ಆ ಪತ್ರದಲ್ಲಿ ಆಹ್ವಾನ ಹಾಗು ಸವಾಲು ಕೂಡಿತ್ತು . ಜೀವಮಾನದಲ್ಲಿ ಒಮ್ಮೆಯೂ ಓಡದ, ೪೦ರ ಆಸು ಪಾಸಿನಲ್ಲಿರುವ ಗೃಹಿಣಿಯರು ನಾವು, ಮೈದಾನವನ್ನೇ ಕಂಡಿರದ ಜನ. ಆದರೆ ನಮ್ಮ ಗುಂಪಿನಲ್ಲಿ ಅನೇಕರಿಗೆ ವ್ಯಾಯಾಮ ಮಾಡುತ್ತಿಲ್ಲ ಎನ್ನುವ ಅಪರಾಧಿ ಪ್ರಜ್ಞೆಯಿದ್ದವರು, ಈ ಅಭ್ಯಾಸ ಒಂದು ರೀತಿಯಲ್ಲಿ ಸಹಾಯವಾಗಬಹುದು ಅನ್ನಿಸಿದ್ದರೆ, ಇನ್ನು ಕೆಲವರಿಗೆ ಇದು ವ್ಯಜನ ಇಳಿಸುವಲ್ಲಿ ಸಹಾಯವಗಬಹುದೇನೋ ಎನ್ನುವ ಆಸೆ. ಹೊಸ ವರ್ಷ ಇನ್ನೇನು ಶುರು ಆಗುವುದರಲ್ಲಿ ಇದ್ದುದರಿಂದ ಹೊಸ ವರ್ಷದ ನಿರ್ಣಯದಲ್ಲಿ ಮ್ಯಾರಥಾನ್ ಓಟವು ಒಂದು. ಅವರವರ ಲೆಕ್ಕಾಚಾರದ ಮೇರೆಗೆ ಈ ಸವಾಲನ್ನು ಸ್ವೀಕರಿಸಿದ್ದಾಯಿತು.
ಜನವರಿ ೩ರೊದು ತರಬೇತಿಯ ಮೊದಲ ದಿನ. ಹತ್ಹಿರದಲ್ಲೇ ಇದ್ದ ಪಾರ್ಕಿನ ಕೊಳದ ಸುತ್ತ ಒಂದು ಸುತ್ತು ಹಾಕಿ ಬರುವುದು ಎಂದು ಶ್ರೀಮತಿ ಲತಾ ರವರು ನಿರ್ಧರಿಸಿದ್ದರು. ಡಲ್ಲಾಸ್ನಲ್ಲಿ ಹವಾಮಾನದ ವೈಪರೀತ್ಯ ಬಹಳ. ಹೆಚ್ಹು ಕಡಿಮೆ ನಮ್ಮ ದೆಲ್ಹಿಯ ಹವೆ ನೆನಪಾಗುತ್ತದೆ. ಚಳಿಗಾಲದಲ್ಲಿ ಬಹಳ ಚಳಿಯು ಬೇಸಿಗೆಯಲ್ಲಿ ಕೆಟ್ಟ ಬಿಸಿಲು ಇರುತ್ತದೆ . ೨೫ ಡಿಗ್ರಿ ಫ್ಯಾರನ್ಹೀಟ್ ತಾಪಮಾನ. ಭಾರತದ ಪ್ರವಾಸದಲ್ಲಿದ್ದ ನಾನು ಗೈರುಹಾಜರ್ . ಪ್ರತಿಯೊಬ್ಬರು ೧೦ ಹೆಜ್ಜೆ ಹಾಕುವಲ್ಲಿಗೆ ಸುಸ್ತು. ಮೊದ ಮೊದಲು ಹೀಗೆ ನಂತರ ಸರಿ ಸರಿಹೋಗುತ್ತದೆ ಎಂದು ತರಬೇತುಗಾರ್ತಿ ಶ್ರೀಮತಿ ಲತಾವರಿಂದ ಭರವಸೆ. ಪ್ರತಿವಾರಕ್ಕೂ ಸಣ್ಣ ಸಣ್ಣ ಗುರಿಗಳನ್ನು ಸೃಷ್ಟಿಸಿ ಅದನ್ನು ಮುಟ್ಟುವಂತೆ ಮಾಡುತ್ತಿದ್ದರು . ನಮ್ಮ ಈ ತರಭೇತಿ ಕಾರ್ಯಕ್ರಮ, ಕನ್ನಡದವರೇ ಹೆಚ್ಚಾಗಿರುವ ಪ್ಲೇನೋ ನಗರದವರನ್ನು ಮುಟ್ಟಲು ತಡವಾಗಲಿಲ್ಲ. ನಾನು ತಾನು ಎಂದು ಜನ ಮುಂದೆ ಬಂದರೂ ಶಿಸ್ತಿನಿಂದ ಪ್ರತಿವಾರದ ಅಭ್ಯಾಸಗಳಿಗೆ ಬರಲಾಗದೆ ಗುಂಪಿನಿಂದ ಹೊರಗೆ ಬಿದ್ದರು. ಹೀಗೆ ತಿಂಗಳು ಗಟ್ಟಲೆ ತರಬೇತಿ ನಡೆಯಿತು. ಬೇಸಿಗೆಯಲ್ಲಿ ೧೦೦ ರಿಂದ ೧೦೫ ಡಿಗ್ರಿ ತಾಪಮಾನ. ಹೀಗಾಗಿ ಅಭ್ಯಾಸದ ಅವಧಿಯನ್ನು ಇನ್ನು ಒಂದು ಘಂಟೆ ಮೊದಲು ಮಾಡಲಾಯ್ತು. ಬೆಳ್ಳಂ ಬೆಳ್ಳಗ್ಗೆ ವಾರಂತ್ಯದ ಸಕ್ಕರೆ ನಿದ್ದೆಯನ್ನು ತ್ಯಜಿಸಿ ಮೈದಾನಕ್ಕೆ ಓಡು. ಜನ ನಿವಾಸಿತ ಪ್ರದೇಶದಲ್ಲೇ ನಮ್ಮ ಅಭ್ಯಾಸಗಳು ಸಾಗಿದ್ದರಿಂದ ಒಂದು ಅಥವಾ ಎರಡು ಮೈಲು ಅಂತರದಲ್ಲಿ ಮನೆ ಮುಂದೆ ನೀರು ಹಾಗು ತಂಪಾದ ಪಾನೀಯಗಳನ್ನು ಇಡಲಾಗುತ್ತಿತ್ತು. ಒಂದು ಫಾರ್ಲೊಂಗ್ ಓಡಲಿಕ್ಕೆ ಆಗದ ನಾವು ನಿರಂತರವಾಗಿ ಒಂದು ಅಥವಾ ಎರಡು ಮೈಲು ಓದುವುದನ್ನು ಅಭ್ಯಾಸ ಮಾಡಲಾಯಿತು. ಹೀಗೆ ಬರು ಬರುತ್ತಾ ೫ ರಿಂದ ೬ ಮೈಲುಗಳನ್ನೂ ಓದಲು ಆರಂಭಿಸಿದೆವು.
ಸೆಪ್ಟಂಬರ್ನಲ್ಲಿ ಶ್ರೀಮತಿ ಲತಾ ಅವರು ನಮಗೆ ತಂಡಗಳ ರಚನೆ ಆಗ ಬೇಕು. ಇದು ೨೬.೨ ಮೈಲು ದೂರದ ರಿಲೇ ಇದನ್ನು ಕ್ರಮವಾಗಿ ೬,೫,೪,೫ ಹಾಗು ಕೊನೆಯ ಹಂತದವರು ೬.೨ ಮೈಲನ್ನು ೧೧ ರಿಂದ ೧೨ ನಿಮಿಷ ಕಾಲಾವಧಿಯಲ್ಲಿ ಕ್ರಮಿಸಬೇಕು ಎಂದು ತಿಳಿಸಿದರು. ನೋಂದಣಿ ಆಗಲೇ ಪ್ರಾರಂಭವಾಗಿರುವುದಾಗಿಯೂ, ಮ್ಯಾರಥಾನ್ ರಿಲೇ ಅತ್ಯಂತ ಜನಪ್ರಿಯವಾಗಿರುವುದರಿಂದ ಬಹಳ ಬೇಗ ಭರ್ತಿಯಾಗುತ್ತದೆ ಎಂದು ತಿಳಿಸಿದರು. ಪರಿಪೂರ್ಣ ಕನ್ನಡ ತಂಡವಾಗಿದ್ದರಿಂದ ಎರಡೂ ತಂಡಗಳಿಗೆ ಮಲ್ಲಿಗೆ ಹಾಗೂ ಜಾಜಿ ಎಂದು ನಾಮಕರಣ ಮಾಡಿ ಎಲ್ಲ ಪಟುಗಳ ವಿಳಾಸ,ವಿವರಗಳೊಂದಿಗೆ ಪ್ರವೇಶ ಧನವನ್ನಿತ್ತು (ಪ್ರವೇಶ ಧನ ಸ್ಕಾಟಿಷ್ ರಯ್ಟ್ ಅಸ್ಪತ್ರೆಗೆ ಧೆಣಿಯಾಗಿ ಸಲ್ಲುತ್ತದೆ) ಅಂತರಜಾಲದಲ್ಲಿ ಅರ್ಜಿಯನ್ನು ಸಲ್ಲಿಸಲಾಯಿತು.
ಸಾಮಾನ್ಯವಾಗಿ ಮ್ಯಾರಥಾನ್ನಲ್ಲಿ ಭಾಗವಹಿಸುವ ಅಭ್ಯರ್ಥಿಗಳು ತಮ್ಮ ಕಂಪನಿಗಳಿಂದಲೋ,ಸಹೋದ್ಯೋಗಿಗಲಿಂದಲೋ ಅಥವಾ ಕುಟುಂಬ ವರ್ಗದವರಿಂದ ನಾನು ಮ್ಯಾರಥಾನ್ಗೆ ಓಡುತ್ತಿದ್ದೇನೆ ನಿಮ್ಮ ಕೈಲಾದಷ್ಟು ಧನ ಸಹಾಯ ಮಾಡಿ ಎಂದು ಕೇಳಿಕೊಂಡು ಬಂದ ದೇಣಿಯನ್ನು ಯಾವುದಾದರು ದತ್ತಿ ಸಂಸ್ಥೆಗಳಿಗೆ ವಿತರಿಸುತ್ತಾರೆ. ಶ್ರೀ. ರಘುರಾಮ್ ರವರು ನಮ್ಮನ್ನು ಉದ್ದೇಶಿಸಿ ಒಂದು ಅಂತರ್ಜಾಲ ಪತ್ರವನ್ನು ಕಳುಹಿಸಿದರು. ನೀವ್ಯಾಕೆ ಭಾರತದ ಅಕ್ಷಯ ಪಾತ್ರ ಫೌನ್ದೆಷನ್ನ್ಗೆನಿಧಿ ಸಂಗ್ರಹಿಸಬಾರದು ಎಂದು. ನಮ್ಮ ತಂಡದ ಅಭ್ಯರ್ಥಿಯಾದ ಶ್ರೀಮತಿ ಗಾಯತ್ರಿ ಶಾಸ್ತ್ರಿಯವರು ನಮಗೋಸ್ಕರ ಒಂದು ಅಂತರ್ಜಾಲ ತಾಣವನ್ನು ನಿರ್ಮಿಸಿದರು. ನಮ್ಮ ಸ್ನೇಹಿತವರ್ಗದವರಿಗೆಲ್ಲಾ ಮನವಿ ಮಾಡಿಕೊಂಡು ಸುಮಾರು ೨೭೦೦ ಡಾಲರ್ನಷ್ಟು ಹಣವನ್ನು ಸಂಗ್ರಹಿಸಿದೆವು. ಎಲ್ಲರಿಗೂ ಮ್ಯಾರಥಾನ್ ಹೆಸರಿನಲ್ಲಿ ಸದುದ್ದೇಶದ ಕಾರ್ಯಕ್ರಮದಲ್ಲಿ ಭಾಗಿಯಾದ ಧನ್ಯತಾ ಭಾವ.
ಮ್ಯಾರಥಾನ್ ದಿನ ಹತ್ತಿರ ಬಂದತೆಲ್ಲಾ ತಳಮಳ ಹೆಚ್ಚಾಯಿತು . ೧೨ ನಿಮಿಷದಲ್ಲಿ ಒಂದು ಮೈಲು ಓಡಲು ಸಾಧ್ಯವೇ ಎಂದು, ಛಲ ಬಿಡದೆ ತಯಾರಿ ನಡೆಸಲಾಯಿತು. ಮ್ಯಾರಥಾನ್ ಬೆಳಿಗ್ಗೆ ೮ ಘಂಟೆಗೆ ಪ್ರಾರಂಭವಾಗುವುದರಿಂದ ಡೌನ್ ಟೌನ್ ತಲುಪಲು ಸುಮಾರು ೧ ಘಂಟೆ ಕಾಲ ಬೇಕೆಂದು ಅಂದಾಜಿಸಲಾಯಿತು. ಎಲ್ಲರೂ ಶ್ರೀಮತಿ ಸುಧಾ ಮಧುಗಿರಿಯವರ ಮನೆಯಲ್ಲಿ ಕರಾರುವಕ್ಕಾಗಿ ೬.೩೦ ಕ್ಕೆ ಇರಬೇಕೆಂದು ತಾಕೀತು ಮಾಡಲಾಯಿತು. ಆಸ್ಥಿಕರೆ ಹೆಚ್ಚಾಗಿರುವ ಗುಂಪಿನಲ್ಲಿ ಎಲ್ಲರೂ ವಿಘ್ನರಾಜನನ್ನು ಪ್ರಾರ್ಥಿಸಿ ಮುಂದುವರಿಯೋಣ ಎಂದು ನಿರ್ಧರಿಸಿ ಮಹಾ ಮಂಗಳಾರತಿ ಮಾಡಿ ಎರಡು ವ್ಯಾನ್ನಲ್ಲಿ ಡೌನ್ ಟೌನ್ ತಲುಪಿದೆವು. ಸ್ವಲ್ಪ ಲಘು ಉಪಹಾರ ಮಾಡಿ ಮ್ಯಾರಥಾನ್ ಶುರುವಾಗುವ ಜಾಗವನ್ನು ತಲುಪಿದೆವು.
ಸ್ಥಳೀಯರಿಂದ ಸಂಕ್ಷಿಪ್ತ ಭಾಷಣ, ಮ್ಯಾರಥಾನ್ ನಡೆಸುವ ಉದ್ದೇಶ ಇತ್ಯಾದಿಗಳ ವಿವರಗಳನ್ನು ನೀಡುತ್ತಿದ್ದರು. ಅಷ್ವದಳಗಳಿಂದ ಪಥ ಸಂಚಾರ, ಸ್ಕಾಟಿಷ್ ಆಸ್ಪತ್ರೆಯ ರೋಗಿಗಳಲ್ಲಿ ಒಬ್ಬರಿಂದ ರಾಷ್ಟ್ರಗೀತೆಯ ಪಟ್ಣ
ಮೊದಲ ಪಂಕ್ತಿಯಲ್ಲಿ ಗಾಲಿ ಕುರ್ಚಿಗಳೊಂದಿಗೆ ಅಂಗವಿಕಲ ಅಬ್ಯರ್ಥಿಗಳು. ನಂತರ ಕೀನ್ಯಾದಿಂದ ಬಂದ ಬಾಲಕ ಬಾಲಕಿಯರು. ನಂತರ ನಾನಾ ಭಾಗಗಳಿಂದ ಬಂದಂಥ ಪಟುಗಳು ಹಾಗು ಸ್ಥಳೀಯರು. ತುಪಾಕಿಯ ಗುಂಡು ಹಾರಿದ ಕೂಡಲೇ ಗಾಲಿ ಕುರ್ಚಿಗಳ ಮೇಲಿದ್ದ ಅಬ್ಯರ್ಥಿಗಳು ಮುಂದಾದರೆ,ಕೀನ್ಯಾದ ಬಾಲಕ ಬಾಲಕಿಯರು ಜಿಂಕೆಯನ್ನು ಮೀರಿಸುವಂತೆ ದಾಖಲೆಗಳನ್ನು ಮುರಿಯುವ ಉದ್ದೇಶದಿಂದ ಮಿಂಚಿನ ಓಟ,ಅದನ್ನು ಬೆಂಬೆತ್ತಿ ಸ್ಥಳೀಯರು. ಈ ಇಪ್ಪತ್ತು ಸಾವಿರ ಅಬ್ಯರ್ಥಿಗಳ ನಡುವೆ ನಮ್ಮ ಅಭ್ಯರ್ತಿಗಳಾದ ಸುಧಾ ಹಾಗು ರೂಪ ಅವರನ್ನು ನೋಡಿದಾಗ ನಮಗಾದ ಸಂತಸ ಅಷ್ಟಿಷ್ಟಲ್ಲ. ಅವರು ಮುಟ್ಟುವ ಜಾಗಕ್ಕೆ ನಮ್ಮ ತಂಡದ ಇನ್ನೆರಡು ಅಬ್ಯಾರ್ಥಿಗಳನ್ನು ಆ ದಿನ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಿದ ಶ್ರೀ ಸತ್ಯ ಶಾಸ್ತ್ರಿ ಹಾಗು ತಾಂಡವ ಮೂರ್ತಿಯವರು ತಲಪಿಸುವಲ್ಲಿ ಯಶಸ್ವಿಯಾದರು. ಹೀಗೆ ಕ್ರಮವಾಗಿ ನಮ್ಮ ತಂಡದವರೆಲ್ಲಾ ೫.೦೨ ನಿಮಿಷದಲ್ಲಿ ೨೬.೨ ಮೈಲನ್ನು ಕ್ರಮಿಸುವಲ್ಲಿ ಯಶಸ್ವಿಯಾದೆವು.
ಉಲ್ಲೇಖಿಸಲೇ ಬೇಕಾದ ಅಂಶವೆಂದರೆ ದಾರಿಯುದ್ದಕ್ಕೂ ಅಲ್ಲಲ್ಲಿ ಸಂಚಾರಿ ಶೌಚಾಲಯಗಳು,ನೀರಿನ ಲೋಟಗಳನ್ನು ಹಿಡಿದು ಕೈ ಚಾಚುವ ಸ್ವಯಂ ಸೇವಕರು ಕುಡಿದ ನೀರಿನ ಲೋಟವನ್ನು ಕಸದ ತೊಟ್ಟಿಗೆ ಹಾಕುವವರು,ನೀವು ಚೆನ್ನಾಗಿ ಕಾಣುತ್ತಿದ್ದೀರಿ,ಇನ್ನು ಕೇವಲ ಕೆಲವೇ ಮೈಲುಗಳಲ್ಲಿ ನೀವು ನಿಮ್ಮ ಗುರಿ ಮುಟ್ಟುವಿರಿ ಎನ್ನುವ ಚೇತೋಹಾರಿ ಉದ್ಗಾರ ಮಾಡುವ ಜನ ಒಟ್ಟಿನಲ್ಲಿ ಒಂದು ವ್ಯವಸ್ಥಿತ ಕಾರ್ಯಕ್ರಮ ಇದಾಗಿತ್ತು. ನಮ್ಮ ಕೈಗಳಿಗೆ ಪದಕವನ್ನಿತ್ತಾಗ ಪ್ರತಿಯೊಬ್ಬರಿಗೂ ಬಹು ಹೆಮ್ಮೆಯ ಕ್ಷಣ. ಎಲ್ಲರಂತೆ ಕೆಲಸ,ಮನೆ ಮಕ್ಕಳ ಜವಾಬ್ದಾರಿ ಹೊತ್ತ ಗೃಹಿಣಿಯರು. ಬಹುತೇಕ ಪಾಲು ನಮಗೆ ನಮ್ಮದೇ ಆದ ಹವ್ಯಾಸಗಳಿಗಾಗಲಿ , ವ್ಯಾಯಾಮಕ್ಕಾಗಲಿ ಸಮಯವಿಲ್ಲವೆನ್ನುವ ನಾವು, ನಮಗೋಸ್ಕರ ಸಮಯವನ್ನು ಮಾಡಿಕೊಂಡು ಇಂಥ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ತೃಪ್ತಿಯನ್ನು ತಂದಿತ್ತು. ಒಂದು ವರ್ಷದ ಸತತ ಅಬ್ಯಾಸ, ಕ್ರೀಡಾಪಟುಗಳೇ ಅಲ್ಲದ ನಾವು ಇಂಥ ಒಂದು ಪ್ರತಿಷ್ಟಿತ ಮ್ಯಾರಥಾನ್ನಲ್ಲಿ ಭಾಗಿಯಾಗಿದ್ದು ಎಲ್ಲಕಿಂತ ಹೆಚ್ಹಾಗಿ ಸ್ಕಾಟಿಷ್ ರಯ್ಟ್ ಹಾಸ್ಪಿಟಲ್ ನ ದೇಣಿ ಸಂಗ್ರಹದ ಕಾರ್ಯಕ್ರಮದಲ್ಲಿ ನಾವು ಭಾಗಿ ಎನ್ನುವ ಭಾವನೆಗೆ ಮಿಗಿಲಾದದ್ದು ಇನ್ನೊಂದಿಲ್ಲ.
ಅತ್ಯುತ್ಸಾಹದಲ್ಲಿ ಇರುವ ನಮ್ಮ ತಂಡ ಈ ಅಭ್ಯಾಸವನ್ನು ಇಲ್ಲಿಗೆ ನಿಲ್ಲಿಸದೇ ನಿರಂತರ ಅಭ್ಯಾಸ ಮಾಡಿ ವಸಂತ ಋತುವಿನಲ್ಲಿ ನಡೆಯುವ ಅರೆಮ್ಯಾರಥಾನ್ (೧೩.೧೦ ಮೈಲಿ) ನಲ್ಲಿ ಭಾಗವಹಿಸಬೇಕೆಂದು ಛಲ ತೊಟ್ಟಿದ್ದಾರೆ. ಎಲ್ಲರಿಗೂ ಶುಭಾಕೊರೋಣ
-ಮೀನಾ ಭಾರದ್ವಾಜ್




