Sponsors

 

 

NEOWAY REALTY SOLUTIONS

 

Search
Community

Please follow us on...

ನಮಸ್ಕಾರ ಕನ್ನಡ ಬಂಧು-ಮಿತ್ರರೆ,

ಮಲ್ಲಿಗೆ ಕನ್ನಡ ಸಂಘದ ಹೊಸ ಕಾರ್ಯಕಾರಿ ಸಮಿತಿಯ ಪರವಾಗಿ ನಿಮ್ಮ ಮಲ್ಲಿಗೆ ಕನ್ನಡ ಸಂಘಕ್ಕೆ ಹ್ರುದ್ಪೂರ್ವಕ ಸ್ವಾಗತ. ಮಲ್ಲಿಗೆ ಸಂಘದ ಈಗಿನ ಸಮಿತಿಗೆ ಅಧ್ಯಕ್ಶೆ ಆಗಿ ಸೇವೆ ಮಾಡುವ ಅವಕಾಶಾ ಸಿಕ್ಕಿರುವುದು ನನಗೆ ಒಂದು ಮಾನ್ಯತೆ ಎಂದು ಭಾವಿಸುತ್ತೀನಿ.

ಮೊದಲಿಗೆ, ಶ್ರೀ ಸುಧೀಂದ್ರ ಪ್ರಹಲಾಧನ್ ಹಾಗು ಶ್ರೀ ಮಧು ಶಾಸ್ತ್ರಿ ಅವರ ಕಾರ್ಯಕಾರಿ ಸಮಿತಿಯ ಯಶಸ್ಸಿಗೆ ಹಾರ್ಧಿಕ ಅಭಿನಂದನೆಗಳು. ಹಾಗು ಶ್ರೀ ಮಧು ಶಾಸ್ತ್ರಿ, ಶ್ರೀ ಕ್ರಿಷ್ನಮೂರ್ತಿ ಹಾಗು ಶ್ರೀ ಶ್ರೀಹರಿ ಗೋವಿಂದರಾಜನ್ ಅವರು ಸಮಿತಿ ಕಾರ್ಯಚರಣೆಗಳನ್ನು ನಮ್ಮ ಹೊಸ ಸಮಿತಿಗೆ ವರ್ಗಾಯಿಸುವ  ಸಂಧಿಕಾಲದಲ್ಲಿ ಮಾಡಿರುವ ಎಲ್ಲಾ ಸಹಾಯಗಳಿಗೂ ಧನ್ಯವಾದಗಳನ್ನು ಹೇಳ ಬಯಸುತ್ತೀನಿ.  ಎಲ್ಲ ಮಾಹಿತಿಗಳನ್ನು ಬಹಳ ಆಯೋಜಿತ ರೀತಿಯಲ್ಲಿ ವಹಿಸಿಕೊಟ್ಟಿರುತ್ತಾರೆ. ನಮ್ಮ ಸಮಿತಿಗೆ, ಮಲ್ಲಿಗೆ ಸಂಘಕ್ಕೆ ಇವರೆಲ್ಲರ ಬೆಂಬಲ ಮುಂದುವರೆಯುವುದೆಂದು ನಂಬಿರುತ್ತೀವಿ.

ನಾನು ಈಗ ಒಪ್ಪಿಕೊಂಡಿರುವ ಈ ಕರ್ತವ್ಯವನ್ನು ನೆರೆವೇರಿಸಲು ಸಹಾಯ ಮತ್ತು ಬೆಂಬಲ ನೀಡಲು ಒಪ್ಪಿಕೊಂಡಿರುವ ನನ್ನ ಸಮಿತಿಯ ಎಲ್ಲಾ ಕಾರ್ಯಕಾರಿಗಳಿಗೆ ಮತ್ತೊಮ್ಮೆ ನನ್ನ ಹ್ರುತ್ಪೂರ್ವಕ ಧನ್ಯವಾದಗಳು. ನಿಮ್ಮ ಈ ಹೊಸ ಕಾರ್ಯಕಾರಿ ಸಮಿತಿಯ ಮುಖ್ಯ ಧ್ಯೇಯ ಏನೆಂದರೆ, ಮಲ್ಲಿಗೆ ಸಂಘದ ಎಲ್ಲಾ ಸದಸ್ಯರು ಸಂಘದೊಡನೆ ಪಾಲ್ಗೊಳ್ಳೊ ಅವಕಾಶ ಮಾಡಿಕೊಡುವುದು ಹಾಗು ನಿಮ್ಮ ನಿರೀಕ್ಷೆಗೆ ತಕ್ಕ ಉತ್ತಮ ಗುಣಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸುವುದು.  ಇದು ನೆರವೇರಲು ಸಮಿತಿ ಹಾಗು ನಿಮ್ಮಗಳ ನಡುವಿನ ಒಳ್ಳೆ ಬಾಂಧವ್ಯ ಅತ್ಯಗತ್ಯ.

ಮಲ್ಲಿಗೆ ಸಂಘ ನಿಮ್ಮ ಪ್ರತಿಭೆಗಳಗಿಗೆ ಆರೈಕೆ ಕೊಡುವುದಲ್ಲದೆ, ನಿಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಹೊರ ತರುವುದಕ್ಕೆ ಒಂದು ಮಾಧ್ಯಮ ಕೂಡ.  ನಿಮ್ಮ ಪಾಲುಗೊಳ್ಳುವಿಕೆಇಂದ ಮಲ್ಲಿಗೆ ಸಂಘಕ್ಕೆ ಒಳ್ಳೆ ಪ್ರತಿಭೆಗಳು ಸಿಗುವುದು.  ಈ ಸಂದರ್ಭದಲ್ಲಿ ನನ್ನ ಮನವಿ, ಮಲ್ಲಿಗೆ ಸಂಘವನ್ನು ಇನ್ನು ಎತ್ತರಕ್ಕೆ ತೆಗೆದುಕೊಂಡು ಹೋಗಲು, ನಿಮ್ಮ ಬೆಂಬಲ ಬೇಕೇ ಬೇಕು. 

ಮುಂದಿನ ಎರಡು ವರುಷದ ಅವಧಿಯೆಲ್ಲಿ, ಹಿಂದೆ ನಡೆಸಿದ, ನೀವು ಮೆಚ್ಚಿದ ಕಾರ್ಯಕ್ರಮಗಳನ್ನು ಹಾಗು ಒಂದೆರಡು ಹೊಸದನ್ನು ನಡೆಸುವ ಯೋಜನೆ ಇರುವುದು.  ಹೊಸ ಕಾರ್ಯಕ್ರಮಗಳನ್ನು ರೂಪಿಸಲು ನಿಮ್ಮ ಸಕಾರಾತ್ಮಕ ಸಲಹೆ, ಅನಿಸಿಕೆಗಳು ಸಹಾಯವಾಗುತ್ತದೆ.

ಸದ್ಯದಲ್ಲೆ ಸಮಿತಿ ಕಾರ್ಯಕ್ರಮಗಳ ವಿವರ, ದಿನಾಂಕಗಳನ್ನು ತಿಳಿಸುವಿದು.  ದಯಮಾಡಿ ಆ ದಿನಗಳನ್ನು ಅಂಕಿತಗೊಳಿಸಿ, ಬಂದು ಭಾಗವಹಿಸಿ, ಬೆಂಬಲಿಸಿ.  ನಾನು ಎಂದಿನಂತೆ ಮತ್ತೆ ಹೇಳುವೆ, ಇದು ನಿಮ್ಮ ಸಂಘ, ನೀವು ಬನ್ನಿ, ನಿಮ್ಮವರೆಲ್ಲರನ್ನು ಕರೆದು ತನ್ನಿ.

ಜೈ ಕರ್ನಾಟಕ ಮಾತೆ!

ಇಂತಿ

ರಾಜಶ್ರೀ ರಮೇಶ್

For MKANT Committee

mkantcommittee@gmail.com

http://www.mallige.org

Ugaadi 2010

Please click here to read the report on the Ugaadi 2010 written by Poornima Subramanya

 

Ugaadi 2010 Pictures  

Please click here for more pictures.